hadi hareya
ಹದಿ ಹರೆಯ
ಹದಿ ಹರೆಯದ ವಯಸ್ಸು
ಲಗಾಮಿಲ್ಲದ ಮನಸ್ಸು
ಸಾವಿರಾರು ಸವಿಗನಸುಗಳು
ಅದರಲ್ಲಿ ಹತ್ತಾರು ಹೊಂಗನಸುಗಳು
ಬಯಕೆಗಳನ್ನು ಈಡೇರಿಸಲಾಗದ ದಾಹ
ಕೆಲವರಿಗಂತೂ ಮದುವೆಯ ಮೋಹ
ಪ್ರೀತಿಯ ಬಲೆಗೆ ಬಿದ್ದು ಬಲ್ಲವರ ತೊಳಲಾಟ
ಸರಸ ವಿರಸಗಳೊಂದಿಗೆ ಒಡನಾಟ
ಅನೇಕರಿಗೆ ಜೀವನ ರೂಪಿಸುವ ತವಕ
ಕೆಲವರಿಗೆ ಸೋಲು ಗೆಲುವಿನ ಅಳುಕ
ಸಾದನೆಯ ಹಾದಿಯಲಿ ಗರಿಕೆದರಿ ನಿಂತರೆ
ಹಲವರು ತಮ್ಮ ಕಪಿ ಮುಷ್ಟಿಯಿಂದ ನೀಡುವರು ತೊಂದರೆ
ಅರಿತು ನಡೆದರೆ ಸುಧೀರ್ಘ ಬಾಳು
ಆಲಸ್ಯಯ ತೋರಿದರೆ ಪಡಬೇಕಾದಿತು ಗೋಳು.