Archive for the 'ಸ್ನೇಹಕ್ಕಾಗಿ ! ಸ್ನೇಹಕೋಸ್ಕರ!!' Category

ಬದುಕು ಕಟ್ಟಿ ಕೊಳ್ಳಲಿಕ್ಕೆ ಒಂದ ಷ್ಟು ದಿನ ! ಕಟ್ಟಿದ ಬದುಕನ್ನು ಉಳಿಸಿ ಕೊಳ್ಳಲಿಕ್ಕೆ ಮತ್ತಷ್ಟು ದಿನ !

ಬದುಕು ಕಟ್ಟಿ ಕೊಳ್ಳಲಿಕ್ಕೆ ಒಂದ ಷ್ಟು ದಿನ ! ಕಟ್ಟಿದ ಬದುಕನ್ನು ಉಳಿಸಿ ಕೊಳ್ಳಲಿಕ್ಕೆ ಮತ್ತಷ್ಟು ದಿನ !
ಹೇಗೆ ಏನು ಮಾಡಿದರೂ ಒಂದಲ್ಲ ಒಂದಿನ ! ಬದುಕು ಬಿಟ್ಟೆ ಹೋಗುವ ಜೀವನ !
ಆದರೂ ಬದುಕಿಗಾಗಿ ಎಲ್ಲ ! ಜನರೆಲ್ಲ ಜಗವೆಲ್ಲ !
ಗಂಡೆಂಬ ಹೆಣ್ಣೆಂಬ ಭೇದ ವಿಲ್ಲ ! ಹುಡುಕಿದರೂ ಸಿಗದ ಪ್ರೀತಿಯ ಹುಡುಕುವರೆಲ್ಲ!
ಸಿಕ್ಕಿದ ಪ್ರೀತಿಯ ದಕ್ಕಿಸಿ ಕೊಳ್ಳಲಾಗುವುದಿಲ್ಲ! ಅದರ ನೆನಪಿನಲೆ ಜೀವನವೆಲ್ಲ !
ಇದರಲಿ ಪಡೆದದ್ದು ಎಷ್ಟು ? ಪಡೆ ಯಲಗದ್ದು ಎಷ್ಟು ! ನಿರಂತರ ಪಯಣ ! ನೆನಪಿನ ಜೊತೆಯಲೇ ಜೀವನ !
ಒಲವಿನ ನೆನಪಲಿ ಈ ನನ್ನ ಕವನ !

ಬದುಕೇ ಇಲ್ಲದವರ ನಡುವೆ ಬದುಕು ಹುಡುಕು !

ಬದುಕೇ ಇಲ್ಲದವರ ನಡುವೆ ಬದುಕು ಹುಡುಕು !
ಅದರಲಿ ನೀ ಕಾಣು ಬಾಳಿನ ಬೆಳಕು !
ಇನ್ನೊಬ್ಬರ ಸಂತೋಷದಿ ನೆಮ್ಮದಿಯನು ಕಂಡಿಕೋ !
ಅವರಿವರು ಅಗುತಾರೆ ಎಂದು ಯಾರಿಗೂ ಕಾಯಬೇಡ !
ನಿನ್ನ ಕಾರ್ಯವ ನೀ ಮಾಡಿಕೊಳ್ಳುವುದು ಮರೆಯಬೇಡ !
ನಿನ್ನಲ್ಲಿ ನಂಬಿಕೆಯ ನೀ ಕಳೆದುಕೊಳ್ಳಬೇಡ !
ಯಾರೇನೆ ಅಂದರೂ ನಿನ್ನ ಧೈರ್ಯವ ಕಳೆದುಕೊಳ್ಳಬೇಡ !
ಏಕೆಂದರೆ ಯಾರು ಯಾರಿಗೂ ಕಾಯುವುದಿಲ್ಲ ! ಅದು ನೀ ಮರೆಯಬೇಡ