Archive for the 'ಕಂಪನ' Category

ಮಳೆ ನಿಂತರೂ ನಿಲ್ಲದು ನಿನ್ನ ನೆನಪುಗಳ ಸರಮಾಲೆ,

ಮಳೆ ನಿಂತರೂ ನಿಲ್ಲದು ನಿನ್ನ ನೆನಪುಗಳ ಸರಮಾಲೆ,

ಮಳೆಯಲ್ಲೇ ಕುಳಿತು ಬರೆದೆ ನಿನಗೊಂದು ಪ್ರೇಮದ ಓಲೆ,

ತೊಯ್ದ ಹಾಳೆಯ ಮೇಲೆ ಪದಗಳ ಸಾಲು ಸಾಲೆ,

ನಿನ್ನ ಸ್ಪರ್ಶಿಸುವ ಗಾಳಿ ನನ್ನ ಉಸಿರಾಗಬೇಕೆಂದು,

ಮಳೆಬಿಲ್ಲಿನ ಮೇಲಿಂದ ಜಾರಿ ಬಂದು ನಿನ್ನ ಮೊಗವ ಮುತ್ತಿಕ್ಕುವ ಹನಿಯಾಗಬೇಕೆಂದು,

ನಿನ್ನ ತುಂಬು ಕಂಗಳಿಗೆ ನಾ ರೆಪ್ಪೆಯ ಚಾಮರವಾಗಬೇಕೆಂದು,

ಹುಣ್ಣಿಮೆಯಲ್ಲಿ ನಿನ್ನ ಚುಂಬಿಸುವ ಬೆಳದಿಂಗಳಾಗಬೇಕೆಂದು,

ನಿನ್ನ ಸ ರೀ ಗ ಮ ದ ಸೆರೆಯಲ್ಲಿ ನಾ ಬಂಧಿಯಾಗಬೇಕೆಂದು,

ನೀ ಬಯಸಿದ ಮೊಗ್ಗಿನ ಮಕರಂದವ ಹೀರುವ ದುಂಬಿಯಾಗಬೇಕೆಂದು,

ನಿನ್ನ ಪುಟ್ಟ ಹೃದಯಕ್ಕೊಂದು ಗೂಡಾಗಬೇಕೆಂದು,

ನೀ ಬರೆವ ಪತ್ರದ ಕೊನೆಯ ಸಾಲಾದರೂ ನಾನಾಗಬೇಕೆಂದು,

ಹೇ ಗೆಳತಿ, ಬಯಸಿ ಬಯಸಿ ಬರೆದ ನನ್ನ ಓಲೆಗೆ,

ಉತ್ತರ ಎಂದು??????

ಇಂತಿ ನಿನ್ನ ಪ್ರೀತಿಯ…

ಕಂಪನ

ಸ್ನೇಹಲೋಕದ ಸ್ನೇಹಿತರಿಗೆ,ಸ್ನೇಹಿತೆಯರಿಗೆ ಸ್ನೇಹದ ದಿನದ ಶುಭಾಶಯಗಳು…..

ಸ್ನೇಹಲೋಕದ ಸ್ನೇಹಿತರಿಗೆ,ಸ್ನೇಹಿತೆಯರಿಗೆ ಸ್ನೇಹದ ದಿನದ ಶುಭಾಶಯಗಳು…..
ಆಗಸದಸ್ಟು ವಿಶಾಲ, ಕಡಲಸ್ಟು ಆಳ,ಹಿಮಾಲಯದಸ್ಟು ಎತ್ತರ ನಮ್ಮ ಸ್ನೇಹ,
ಬರಡಾದ ಬದುಕಿಗೆ ಭಾವನೆಗಳ ಚಿಲುಮೆ ಈ ಸ್ನೇಹ,
ಸೋತ ಮನಸಿಗೆ ಸ್ಪೂರ್ತಿ ಈ ಸ್ನೇಹ,
ನಡೆದಸ್ಟು ದೂರ ಜೊತೆಗಿರುವುದೀ ಸ್ನೇಹ, ಕೊನೆಯೆಂಬುದ ಕಾಣದ ಈ ಸ್ನೇಹ,
ಪದಗಳಲಿ ಬರೆಯಲಾಗದ, ಮಾತಿನಲ್ಲಿ ಹೇಳಲಾಗದ ಈ ಸ್ನೇಹ,
ತನಗಾಗಿ, ತನ್ನವರಿಗಾಗಿ, ತನು ಮನವ ಧಾರೆಯೆರೆಯುವ ಸ್ನೇಹ,
ಅಡೆ ತಡೆ ಇಲ್ಲದೆ, ಕೊನೆ ಮೊದಲಿಲ್ಲದೆ, ಹಸ್ತ ಚಾಚಿದೆ ಈ ಸ್ನೇಹ,
ಆದಿಯನ್ನು ಮಾತ್ರ ಕಂಡು ಅಂತ್ಯವನ್ನೇ ಕಾಣದ ಈ ಸ್ನೇಹ,
ಸ್ನೇಹದ ಕಡಲಲ್ಲಿ, ಭಾವನೆಗಳ ದೋಣಿಯೇರಿ,
ಕವನಗಳ ಬಲೆಯ ಬೀಸಿ,ಪ್ರೀತಿಯ ಅಲೆಗಳ ಮೇಲೆ,ಸ್ನೇಹಿತರ ಬರಸೆಳೆಯುವ,
ಇಂತಿ ನಿಮ್ಮ ಪ್ರೀತಿಯ…
ಕಂಪನ

ಮುಂಜಾನೆಯ ಚುಮು ಚುಮು ಚಳಿಯಲ್ಲಿ ನಿನ್ನ ಬೆಚ್ಚನೆ ಸ್ಪರ್ಶ ಕಂಡೆ

ಮುಂಜಾನೆಯ ಚುಮು ಚುಮು ಚಳಿಯಲ್ಲಿ ನಿನ್ನ ಬೆಚ್ಚನೆ ಸ್ಪರ್ಶ ಕಂಡೆ,
ಮುಂಗುರುಳಿಗೆ ಮುತ್ತಿಡುವ ತಂಗಾಳಿಯಲ್ಲಿ ನಿನ್ನ ಮೊಗವ ಕಂಡೆ,
ಸಂಗೀತದ ಅಲೆಗಳ ಮೇಲೆ ತೇಲಿ ಬಂದ ಸುಪ್ರಬಾತದ ಸ್ವರದಲ್ಲಿ ನಿನ್ನ ಮೌನ ಕಂಡೆ,
ಹೊಂಗಿರಣಗಳ ಬೆಳಕಿನಲ್ಲಿ ನಿನ್ನ ನಗುವ ಕಂಡೆ,
ಎಳೆ ಬಳ್ಳಿಯ ಹೊಯ್ದಾಟದಲ್ಲಿ ನಿನ್ನ ನಡಿಗೆಯ ಕಂಡೆ,
ಸೋನೆ ಮಳೆಯಂತೆ ಸುರಿದ ನಿನ್ನ ಪ್ರೀತಿಯಲ್ಲಿ, ನನ್ನ ಹೃದಯವ ನೆನೆಸಿಕೊಂಡೆ,
ಸಾಗರದಂಥ ನನ್ನ ಮನಸಿನ ಭಾವನೆಗಳ ನೀ ಹಂಚಿಕೊಂಡೆ……….
ಇನ್ನು ಕಾಯಿಸಬೇಡ ನನ್ನ, ಕಪ್ಪೆಚಿಪ್ಪಿನ ಮುತ್ತಂತೆ,
ಕಣ್ಣೀರ ಕಡಲಲ್ಲಿ ತೇಲುವ ಬಿಂಬದಂತೆ ಕಾಯುವೆ ನಿನ್ನ,
ಇಂತಿ ನಿನ್ನ ಪ್ರೀತಿಯ …
ಕಂಪನ

ಕೆಂದಾವರೆಯ ಹಾಸಿಗೆಯಲ್ಲಿ

ಕೆಂದಾವರೆಯ ಹಾಸಿಗೆಯಲ್ಲಿ ,
ಚಿಗುರೆಲೆಯನ್ನು ಹೊದ್ದು ಮಲಗಿರುವ,
ಚಂದ್ರ ಚಕೋರಿಗೆ, ಚಂದ್ರಮನ ಶಶಿ ಕಿರಣವನ್ನು ಅಳಿಸಿ,
ಇಬ್ಬನಿಯನ್ನು ಕರಗಿಸಿ, ಹಕ್ಕಿಗಳ ಎಬ್ಬಿಸಿ,
ಚಿಲಿಪಿಲಿಗಳ ನುಡಿಸಿ,
ಬೆಳ್ಳಿ ರಥದ ಮೇಲೆ ಬಂದ,
ಉದಯ ರವಿಯ ಉಷಾಕಿರಣದ,
ಪ್ರಥಮ ಚುಂಬನ,
ಇಂತಿ ನಿನ್ನ ಪ್ರೀತಿಯ …
ಕಂಪನ