Archive for the 'ಅರಳುತಿರು ಜೀವದ ಗೆಳತಿ' Category

ಒಂಟಿತನದ ಗುರುವೆ ಒಲವೆ

ಒಂದೆ ಸಮನೆ ನಿಟ್ಟುಸಿರು ಪಿಸುಗುಡುವ ತೀರದ ಮೌನ

ತುಂಬಿ ತುಳುಕೊ ಕಂಗಳಲಿ ಕರಗುತಿದೆ ಕನಸಿನ ಬಣ್ಣ

ಎದೆಯ ಜೋಪಡಿಯ ಒಳಗೆ ಕಾಲಿಡದೆ ಕೊಲುತಿದೆ ಒಲವು

ಮನದ ಕಾರ್ಮುಗಿಲಿನ ತುದಿಗೆ ಮಳೆಬಿಲ್ಲಿನಂತೆ ನೋವು

ಕೊನೆಯಿರದ ಏಕಾಂತವೆ ಒಲವೆ

ಒಂದೆ ಸಮನೆ ನಿಟ್ಟುಸಿರು ಪಿಸುಗುಡುವ ತೀರದ ಮೌನ

ತುಂಬಿ ತುಳುಕೊ ಕಂಗಳಲಿ ಕರಗುತಿದೆ ಕನಸಿನ ಬಣ್ಣ

ಜೀವಾ ಕಳೆವಾಮೃತಕೆ ಒಲವೆಂದು ಹೆಸರಿಡಬಹುದೆ

ಪ್ರಾಣ ಉಳಿಸೊ ಕಾಯಿಲೆಗೆ ಪ್ರೀತಿಯೆಂದೆನ್ನಬಹುದೆ

ಹೊಂಗನಸ ಚಾದರದಲ್ಲಿ ಮುಳ್ಳಿನ ಹಾಸಿಗೆಯಲ್ಲಿ ಮಲಗಿ

ಯಾತನೆಗೆ ಮುಗುಳ್ನಗು ಬರಲು ಕಣ್ಣ ಹನಿ ಸುಮ್ಮನೆ ಒಳಗೆ

ಅವಳನ್ನೆ ಜಪಿಸುವುದೆ ಒಲವೆ

ಜೀವಾ ಕಳೆವಾಮೃತಕೆ ಒಲವೆಂದು ಹೆಸರಿಡಬಹುದೆ

ಪ್ರಾಣ ಉಳಿಸೊ ಕಾಯಿಲೆಗೆ ಪ್ರೀತಿಯೆಂದೆನ್ನಬಹುದೆ

ನಾಲ್ಕು ಪದದಾ ಗೀತೆಯಲಿ ಮಿಡಿತಗಳ ಬಣ್ಣಿಸಬಹುದೆ

ಮೂರು ಸ್ವರದ ಹಾಡಿನಲಿ ಹೃದಯವನು ಹರಿಬಿಡಬಹುದೆ

ಉಕ್ಕಿಬರುವ ಕಂಠದಲಿ ನರಳುತಿದೆ ನಲುಮೆಯ ಗಾನ

ಬಿಕ್ಕಳಿಸುವ ಎದೆಯೊಳಗೆ ನಗುತಲಿದೆ ಮಡಿದ ಕವನ

ಒಂಟಿತನದ ಗುರುವೆ ಒಲವೆ

ಹೇ ಹೇ ಹೇ.. ಆಹಾಹ..

ಹೇ ಹೇ ಹೇ.. ಆಹಾಹ..
ತನನಾನ ತನನಾನ ತನನಾನನ

ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ
ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ
ಈ ಎದೆಯಲ್ಲಿ ಸಿಹಿಯಾದ ಕೋಲಾಹಲ
ನನ್ನೆದುರಲ್ಲಿ ನೀ ಹೀಗೆ ಬಂದಾಗಲೆ
ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ
ನಾ ನಿಂತಲ್ಲೇ ಹಾಡಾದೆ ನಿನ್ನಿಂದಲೇ
ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ
ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ

ಇರುಳಲ್ಲಿ ಜ್ವರದಂತೆ ಕಾಡಿ ಈಗ
ಹಾಯಾಗಿ ನಿಂತಿರುವೆ ಸರಿಯೇನು ?
ಬೇಕಂತಲೇ ಮಾಡಿ ಏನೋ ಮೋಡಿ
ಇನ್ನೆಲ್ಲೊ ನೋಡುವ ಪರಿಯೇನು
ಈ ಮಾಯೆಗೆ ಈ ಮರುಳಿಗೆ
ನಿನ್ನಿಂದ ಕಳೆ ಬಂದಿದೆ
ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ

ಹೇ ಹೇ ಹೇ.. ಆಹಾಹ..
ತನನಾನ ತನನಾನ ತನನಾನನ

ಹೋದಲ್ಲಿ ಬಂದಲ್ಲಿ ಎಲ್ಲ ನಿನ್ನ
ಸೊಂಪಾದ ಚೆಲುವಿನ ಗುಣಗಾನ
ಕೇದಗೆ ಗರಿಯಂತೆ ನಿನ್ನ ನೋಟ
ನನಗೇನೋ ಅಂದಂತೆ ಅನುಮಾನ
ಕಣ್ಣಿಂದಲೆ ಸದ್ದಿಲ್ಲದೆ
ಮುದ್ದಾದ ಕರೆ ಬಂದಿದೆ
ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ

ಅರಳುತಿರು ಜೀವದ ಗೆಳತಿ

ಅರಳುತಿರು ಜೀವದ ಗೆಳತಿ
ಸ್ನೇಹದ ಸಿಂಚನದಲ್ಲಿ
ಬಾಡದಿರು ಸ್ನೇಹದ ಹೂವೆ
ಪ್ರೇಮದ ಬಂಧನದಲ್ಲಿ
ಮನಸಲ್ಲೇ ಇರಲಿ ಭಾವನೆ
ಮಿಡಿಯುತಿರಲಿ ಮೌನವೀಣೆ
ಹೀಗೆ ಸುಮ್ಮನೆ
ಅರಳುತಿರು ಜೀವದ ಗೆಳತಿ……!!
ಹಕ್ಕಿಯು ಹಾಡಿದೆ
ತನ್ನ ಹೆಸರನು ಹೇಳದೆ
ಸಂಪಿಗೆ ಬೀರಿದೆ ಕಂಪನು
ಯಾರಿಗು ಕೇಳದೆ
ಬೀಸುವ ಗಾಳಿಯ ಹಕ್ಕಿಯ ಹಾಡಿನ
ನಂಟಿಗೆ ಹೆಸರಿನ ಹಂಗಿಲ್ಲ
ನಮಗೇಕೆ ಅದರ ಯೋಚನೆ
ಬೇಡ ಗೆಳತಿ ನಂಟಿಗೆ ಹೆಸರು
ಯಾಕೇ ಸುಮ್ಮನೆ ಏ.ಏ..
ಅರಳುತಿರು ಜೀವದ ಗೆಳತಿ…..!!
ಮಾತಿಗೆ ಮೀರಿದ
ಭಾವದ ಸೆಳೆತವೆ ಸುಂದರ
ನಲುಮೆಯು ತುಂಬಿದ
ಮನಸಿಗೆ ಬಾರದು ಬೇಸರ
ಬಾಳ ದಾರಿಯಲಿ ಬೇರೆ ಆದರು
ಚಂದಿರ ಬರುವನು ನಮ್ಮ ಜೊತೆ
ಕಾಣುವೆನು ಅವನಲಿ ನಿನ್ನನೇ
ಇರಲಿ ಗೆಳತಿ ಈ ಅನುಬಂಧ
ಹೀಗೇ ಸುಮ್ಮನೆ……..!!!
ಅರಳುತಿರು ಜೀವದ ಗೆಳತಿ
ಸ್ನೇಹದ ಸಿಂಚನದಲ್ಲಿ
ಬಾಡದಿರು ಸ್ನೇಹದ ಹೂವೆ
ಪ್ರೇಮದ ಬಂಧನದಲ್ಲಿ
ಮನಸಲ್ಲೇ ಇರಲಿ ಭಾವನೆ
ಮಿಡಿಯುತಿರಲಿ ಮೌನವೀಣೆ
ಹೀಗೆ ಸುಮ್ಮನೆ
ಅರಳುತಿರು ಜೀವದ ಗೆಳತಿ……..!!!!