ಅಲೆಮಾರಿ
ಅಲೆಮಾರಿ
ಪಯಣಿಗನ ಆಲಂಗಿಸುವ
ತವಕದಿ ಮೈಚೆಲ್ಲಿರುವ
ಅಂತ್ಯವಿಲ್ಲದ ಹಾದಿ
ತಬ್ಬುವ ನೆಲೆಯ
ಹುಡುಕಾಟದಲಿ ಕಳೆದುಹೋಗಿರುವ
ಅಲೆಮಾರಿಯು ನಾ……..
ದಾರಿ,ಹೆದ್ದಾರಿ,ಕಾಡುಡಾರಿ
ಕಾಲುದಾರಿ;ಗಮ್ಯ ಅಗಮ್ಯ
ಅರಿವಿಲ್ಲದ ಜೀವನದ ದಾರಿ
ಹುಟ್ಟು ಸಾವಿನ ನಡುವೆ
ನಡುದಾರಿಯಲಿ ಅಲೆವ
ಅಲೆಮಾರಿಯು ನಾ…
ಪಥಪಥವೂ ಅನೂಹ್ಯ
ಪಥದಲಿನ ಮತವು ನಿಸ್ಪ್ರುಯ್ಯ
ಯಕಶ್ಚಿತ್ ಜೀವನಪಥದ
ಯಗ್ನಮಾರ್ಗದಲಿ ಅಲೆದು
ಸಾವನು ಆಲಂಗಿಸಿ,ನಿಶ್ಚಲವಾಗಿ
ಕಳೆದುಹೋಗುವ
ಪಯಣಿಗನು ನಾ….