Archive for June, 2008

ninnade

“ದೀಪವೂ ನಿನ್ನದೇ,
ಗಾಳಿಯು ನಿನ್ನದೇ,
ಆರದಿರಲಿ ಬೆಳಕು…..

ಕಡಲೂ ನಿನ್ನದೇ,
ಹಡಗೂ ನಿನ್ನದೇ,
ಮುಳುಗದಿರಲಿ ಬದುಕು….”

ondu dina

“ಕಾಣದ ಕಡಲಿಗೆ ಹಂಬಲಿಸಿದೆ ಮನ //
ಎಲ್ಲಿರುವುದೋ ಅದು, ಎಂತಿರುವುದೋ ಅದು,
ನೋಡಬಲ್ಲೆನೆ ಒಂದು ದಿನ,
ಕಡಲನು, ಕೂಡಬಲ್ಲೆನೇ ಒಂದು ದಿನ//”

vidhige

//ವಿಧಿಗೆ… //

ಓ ವಿಧಿಯೇ ,
ಯಾಕಿಸ್ಟು “ಕ್ರೌರ್ಯ ” ನಿನಗೆ?!

ನಿನಗಿಲ್ಲ ಯಾರೂ ಎಣೆ,ನಂಬುವವಳು ನಾನಲ್ಲ ,
ಆದರೂ,ನೀ ಒಡ್ಡುವ ಪರೀಕ್ಷೆಗಳಿಗೆಲ್ಲಿಯ ಎಣೆ ,

ನೀ ಹಿಡಿದ ಬ್ಯಾಟಿನ “ಸಿಕ್ಸರಿಗೆ “,
ಮೊಳೆ ಮಾಂಸ ಗಳ “ಚಂಡು” ನಾನು ,

ನೀ ಹೇಗೆ ಅರಿಯೆ ನಮ್ಮಗಳ ಆಳ ,
ಭಾವಗಳ ತಳ ಮಳ..

ವಿಧಿಯೇ ನೀನು ನನ್ನ ಪರಮ ವೈರಿ ,
ಓಡು, ತಪ್ಪಿಸಿಕೊ ,ನಿನ್ನ ಬಂದ ಬೇಡ ನನಗೆ,

ಸೆರೆ ಸಿಕ್ಕರೆ ,ನಿನಾಗುವುದು ಖಂಡಿತ,
ನನ್ನ ಅಂಗಳದಲಿ ,”ಕಾಲ್ಚೆಂಡು”.

ನಿಮ್ಮ ಮನೆ ಮಗಳು,
दिशा/ದಿಶಾ/DISHA

hadi hareya

ಹದಿ ಹರೆಯ
ಹದಿ ಹರೆಯದ ವಯಸ್ಸು
ಲಗಾಮಿಲ್ಲದ ಮನಸ್ಸು
ಸಾವಿರಾರು ಸವಿಗನಸುಗಳು
ಅದರಲ್ಲಿ ಹತ್ತಾರು ಹೊಂಗನಸುಗಳು
ಬಯಕೆಗಳನ್ನು ಈಡೇರಿಸಲಾಗದ ದಾಹ
ಕೆಲವರಿಗಂತೂ ಮದುವೆಯ ಮೋಹ
ಪ್ರೀತಿಯ ಬಲೆಗೆ ಬಿದ್ದು ಬಲ್ಲವರ ತೊಳಲಾಟ
ಸರಸ ವಿರಸಗಳೊಂದಿಗೆ ಒಡನಾಟ
ಅನೇಕರಿಗೆ ಜೀವನ ರೂಪಿಸುವ ತವಕ
ಕೆಲವರಿಗೆ ಸೋಲು ಗೆಲುವಿನ ಅಳುಕ
ಸಾದನೆಯ ಹಾದಿಯಲಿ ಗರಿಕೆದರಿ ನಿಂತರೆ
ಹಲವರು ತಮ್ಮ ಕಪಿ ಮುಷ್ಟಿಯಿಂದ ನೀಡುವರು ತೊಂದರೆ
ಅರಿತು ನಡೆದರೆ ಸುಧೀರ್ಘ ಬಾಳು
ಆಲಸ್ಯಯ ತೋರಿದರೆ ಪಡಬೇಕಾದಿತು ಗೋಳು.

ರಾತ್ರಿ ರಾಣಿ

// ರಾತ್ರಿ ರಾಣಿ //

ಕತ್ತಲು ನನ್ನಿಸ್ಟದ ಗೆಳತಿ
ನನ್ನ ಏಕಾಂತದ ಸಂಗಾತಿ/

ಕತ್ತಲಲ್ಲೇ, ಚಂದ್ರಮಳ ಆಗಮನ,
ಗಗನದ ತುಂಬೆಲ್ಲ “ಚುಕ್ಕಿ”ಗಳ ರಂಗೋಲಿ,

ಮುಖವಾಡಗಳ ಹಗಲನ್ನು
ದ್ವೇಷಿಸುತ್ತೇನೆ ನಾನು..?!

ಹಗಲಿನ ಕ್ರೌರ್ಯಗಳನ್ನೂ ಮರೆಮಾಡಿ,
ರಜನಿ ಕೈ ಹಿಡಿದು ನಡೆಸುತ್ತಾಳೆ,
ನಿದ್ರೆಯ ಮಂಚದಲ್ಲಿ
ಸವಿಗನಸು ಗಳ ಲಾಲಿ ಹಾಡುತ್ತಾಳೆ,
ಚುಕ್ಕಿ ಚಂದ್ರಮರು ಕಾವಲಿಗೆ,

ಹಗಲಿನ ಹಸಿವು,ಮೋಸ, ತಳಮಳ,
ಎಲ್ಲವೂ “ಶೂನ್ಯ” ಇಲ್ಲಿ,
ಶೂನ್ಯತೆ ಯಲ್ಲೇ ಬದುಕಿನ “ಪರಿಪೂರ್ಣತೆ”

ಕತ್ತಲೆ ಹೊಸ ಸೃಷ್ಟಿಯ ವೇದಿಕೆ,
ಬತ್ತಲಿನಲ್ಲೇ ಬದುಕಿನ ಮರ್ಮ,
ಭುವಿ-ಭಾನು ಗಳ ಮೈಥುನ,
ಅಂತರಂಗ-ಬಹಿರಂಗ ಗಳ ಪರದೆ ಸರಿಸಿ
“ತಮ್ಮತನ” ಗಳ ಅನಾವರಣ..!!

ಮತ್ತೆ ಬೆಳಗಾಗುತ್ತೆ,
ಬೆಚ್ಚುತ್ತೇನೆ ಹಗಲು ನೆನೆದು,
ಕಾಯುತ್ತೇನೆ, ರಾತ್ರಿ ರಾಣಿಗೆ,
ಅರಹುತ್ತೇನೆ, “ರಜನಿಯೇ ಬಂದು ನನ್ನ ಅಪ್ಪಿಕೋ”
ಕನಸುಗಳ ಹೆಣೆಯುತ್ತ , ಈ ಜಗವ ಮರೆಯುತ್ತ,
ನಿನ್ನಲ್ಲೇ, ಲೀನವಾಗಿ “ಸಮಾಧಿ” ಯಾಗುತ್ತೇನೆ,
ಬೆಳಗಿನ ಹಂಗು ಬೇಡ ಎನಗೆ ……?!

ನಿಮ್ಮ ಮನೆ ಮಗಳು,

दिशा/ದಿಶಾ/DISHA

Hello world!

Welcome to Kannadavedike.net. This is your first post. Edit or delete it, then start blogging!